Menu

ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಶೌಚಾಲಯದಲ್ಲಿ ಗಂಡು ಮಗುವನ್ನುಹೆತ್ತ ಮಹಿಳೆ

  • Published in ಉಡುಪಿ
  • Read 45 times
  • Comments::DISQUS_COMMENTS
ಉಡುಪಿ : ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯೊಬ್ಬಳು ಗಂಡು ಮಗುವನ್ನು ಹೆತ್ತ ಘಟನೆ ಮಂಗಳವಾರ ನಡೆದಿದೆ. 
 
ಆಕೆ ವಿಜಯಾ (36). ಕುಮಟಾದ ಕಿಮಾನಿ ಗ್ರಾಮದವರಾದ ಇವರು ರಾಜು ಎನ್ನುವವರ ಪತ್ನಿ. ಪತಿ ರಾಜು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದಾರೆ. ಕಾರವಾರದಿಂದ ಉಡುಪಿಗೆ ರೈಲಿನಲ್ಲಿ ಮಂಗಳವಾರ ಬೆಳಗ್ಗೆ ಬಂದಿದ್ದರು. ತುಂಬು ಗರ್ಬಿಣಿಯಾಗಿದ್ದ ಇವರನ್ನು ಕಂಡು ರೈಲ್ವೆ ಸಿಬಂದಿ ಅಂಬಲಪಾಡಿ ವಿಶಾಲ್ ಶೆಟ್ಟಿ ಮತ್ತು 108 ಆಂಬುಬುಲೆನ್ಸ್‌ನವರಿಗೆ ದೂರವಾಣಿ ಕರೆ ನೀಡಿದರು. ವಿಶಾಲ್ ಶೆಟ್ಟಿಯವರು ಬರುವಾಗ ರೈಲ್ವೆ ನಿಲ್ದಾಣದ ವಿಶ್ರಾಂತಿಗೃಹದ ಶೌಚಾಲಯದಲ್ಲಿ ಹೆರಿಗೆ ಆಗಿತ್ತು. ಸ್ಥಳೀಯ ಮಹಿಳೆಯೋರ್ವರ ಸಹಕಾರದಿಂದ ಆಕೆಯನ್ನು ನಾಜೂಕಾಗಿ 108 ಆಂಬುಲೆನ್ಸ್‌ನಲ್ಲಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.

ತಾಯಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು 2.5 ಕೆ.ಜಿ. ತೂಕವಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಗಂಡನಿಗೆ ದೂರವಾಣಿ ಕರೆಯಲ್ಲಿ ವಿಶು ಶೆಟ್ಟಿಯವರು ವಿಷಯ ತಿಳಿಸಿದ್ದು ಬುಧವಾರ ಆಸ್ಪತ್ರೆಗೆ ಬರುವುದಾಗಿ ತಿಳಿಸಿದರು.
More in this category: « ಶಾಸಕ ಹಾಲಾಡಿ ಅವರಿಗೆ ಮತ್ತೆ ಪಾತಕಿಯಿಂದ ಬೆದರಿಕೆ ಕರೆ; ಹಾಲಾಡಿ ನಿವಾಸಕ್ಕೆ ಎಸ್ಪಿ ಭೇಟಿ ಸಾಹಿತ್ಯ – ಕಲೆ ಹೊರತಾದ ಜೀವನವಿಲ್ಲ : ಪ್ರಥ್ವಿರಾಜ್ »
back to top