Menu

ಶಾಸಕರನ್ನು ಹಾಡಿಹೊಗಳಿದ ಭೂತಗ ಪಾತಕಿ

  • Published in ಉಡುಪಿ
  • Read 63 times
  • Comments::DISQUS_COMMENTS
ಕುಂದಾಪುರ: ಹಫ್ತಾ ಕೊಡುವಂತೆ ಕುಂದಾಪುರ ಶಾಸಕ ಹಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಬೆದರಿಕೆ ಹಾಕಿದ್ದ ಭೂಗತ ಪಾತಕಿ ರವಿಪೂಜಾರಿ ಈಗ ಶ್ರೀನಿವಾಸ ಶೆಟ್ಟಿ ಅವರನ್ನು ಫೋನ್ ಮಾಡಿ ಹಾಡಿ ಹೊಗಳಿದ್ದಾನಂತೆ.
 
ಈ ಮಾತನ್ನು ಸ್ವತ: ಹಾಲಾಡಿಯವರೇ ಹೇಳಿದ್ದಾರೆ. ರವಿ ಪೂಜಾರಿ ಎರಡು ದಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದ, ಆದರೆ ಬುಧವಾರ ಸಂಜೆ ಫೋನ್ ಮಾಡಿ ತುಳುವಿನಲ್ಲಿ ಮಾತನಾಡಿ ನಿಮ್ಮಿಂದ ನನಗೆ ಒಂದು ರೂಪಾಯಿ ಕೂಡಾ ಬೇಡ. ನನಗೆ ಹಲವಾರು ಜನ ಫೋನ್ ಮಾಡಿ ನೀವು ಜನೋಪಕಾರಿ ಎನ್ನುವುದನ್ನು ತಿಳಿಸಿದ್ದಾರೆ. ಇನ್ನು ಮುಂದೆ ನಿಮ್ಮಿಂದ ಹಣ ಕೇಳುವುದಿಲ್ಲ ಎಂದಿದ್ದಾನಂತೆ.

ಅದಕ್ಕೂ ಮೊದಲು ರವಿ ಪೂಜಾರಿ ಬೆದರಿಕೆ ಹಾಕಿ ಹಣ ಕೊಡುವಂತೆಯೂ ತನ್ನ ವಿರೋಧಿಗೆ ಸಹಾಯ ಮಾಡುತ್ತಿರುವುದಾಗಿಯೂ ಹೇಳಿದ್ದನಂತೆ.

ಈ ಬಗ್ಗೆ ಶಾಸಕ ಶ್ರೀನಿವಾಸ ಶೆಟ್ಟಿ ಅವರು ಶಂಕರನಾರಾಯಣ ಠಾಣೆಗೆ ದೂರು ನೀಡಿದ್ದರು. ಶಾಸಕರ ಮನೆಗೆ ಹಾಗೂ ಅವರಿಗೆ ವಿಶೇಷ ಭದ್ರತೆಯನ್ನೂ ಒದಗಿಸಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಉಡುಪಿ ಎಸ್ಪಿ ಅಣ್ಣಾ ಮಲೈ ಶಾಸಕರ ಮನೆಗೆ ತೆರಳಿ ಮಾತುಕತೆ ಮಾಡಿದ್ದರು.
More in this category: « ವೈದ್ಯ – ರೋಗಿಯ ಸಂಬಂಧ ಪವಿತ್ರವಾದದ್ದು : ಡಾ || ರವೀಂದ್ರ ರಾವ್
back to top